Adhar card new rules : ಈ ಎರಡು ಮಾಹಿತಿ ಜೀವನದಲ್ಲಿ ಒಂದು ಬಾರಿ ಮಾತ್ರ ಬದಲಾವಣೆ ಮಾಡಬಹುದು.

ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ತುಂಬಾ ಮುಖ್ಯವಾದ ದಾಖಲೆಯಾಗಿದೆ.ಯಾವುದೇ ಸರ್ಕಾರಿ ಯೋಜನೆ, ಬ್ಯಾಂಕ್ ಖಾತೆ ತೆರೆಯಲು, ಪಾನ್ ಕಾರ್ಡ್ ಲಿಂಕ್ ಮಾಡಲು ಆಧಾರ್ ಕಾರ್ಡ್ ಪ್ರಮುಖ ದಾಖಲೆ ಯಾಗಿದೆ. ಅದರಿಂದ ಆಧಾರ್ ಕಾರ್ಡ್ ನ ಮಾಹಿತಿ ಸರಿಯಾಗಿರಬೇಕು.

ಹೊಸ ನಿಯಮಗಳು.

ಆಧಾರ್ ಕಾರ್ಡ್ ನಲ್ಲಿ ಇತ್ತೀಚಿಗೆ ಹೊಸ ನಿಯಮಗಳು ಜಾರಿಗೆ ಬಂದಿವೇ.ಕೆಲವು ವಿವರಗಳನ್ನು ಒಂದು ಬಾರಿ ಮಾತ್ರ ಚೇಂಜ್ ಮಾಡಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸ್ಪಷ್ಟವಾಗಿ ತಿಳಿಸಿದೆ.

ಯಾಕೆ ಈ ನಿಯಮ ಜಾರಿಗೆ ತರಲಾಗಿದೆ.

ಈ ನಿಯಮ ಜಾರಿಗೆ ತರಲು ಕಾರಣ ಏನೆಂದರೆ ವ್ಯಕ್ತಿಯ ಮೂಲ ಗುರುತು ಮಾಹಿತಿಯಲ್ಲಿ ಗೊಂದಲ ಮತ್ತು ಜನ್ಮ ದಿನಾಂಕದಲ್ಲಿ ಯಾವುದೇ ಮೋಸ ಆಗಬಾರದು ಎಂದು.ಇವುಗಳಲ್ಲಿ ಅನವಶ್ಯಕ ಬದಲಾವಣೆ ಆಗಬಾರದು ಎಂದು ತಿಳಿಸಿದೆ.

ಯಾರಾದರೂ ತಮ್ಮ ವಯಸ್ಸನ್ನು ತಪ್ಪಾಗಿ ನಮೂದಿಸಿ ನಂತರ ತಿದ್ದುಪಡಿ ಮಾಡಿದರೆ ಸರ್ಕಾರಿ ಪ್ರಕ್ರಿಯೆಗಳಲ್ಲಿ ಸಮಸ್ಯೆ ಉಂಟಾಗುವ ಸಂಭವವಿದೆ.

ನೀವು ಗಮನಿಸಬೇಕಾದ ಇನ್ನೊಂದು ವಿಷಯ ವಿದೆ.ಕೆಲವು ಸಂದರ್ಭಗಳಲ್ಲಿ ಮಾಹಿತಿ ತಪ್ಪಾಗಿ ನಮೂದಿಸಿ ಅದನ್ನು ಸರಿಮಾಡಲು ಕೆಲವು ವಿಶೇಷ ಅನುಮತಿ ಅಗತ್ಯವಿದೆ.ಆದರೆ ಅಷ್ಟು ಸುಲಭವಲ್ಲ. ಹೆಚ್ಚಿನ ಪರಿಸೀಲನೆ ನಂತರ ಅದನ್ನ ಬದಲಾವಣೆ ಮಾಡಬಹುದು.

ಯಾವ ವಿವರಗಳಿಗೆ ಮಿತಿ ಇದೆ.

ಬೇರೆ ವಿಷಯಕ್ಕೆ ಬಂದರೆ ಎಲ್ಲವೂ ಅಷ್ಟೊಂದು ಕಠಿಣವಾಗಿಲ್ಲ. ಕೆಲವು ವಿಷಯಗಳನ್ನು ಹಲವು ಬಾರಿ ಬದಲಾವಣೆ ಮಾಡಬಹುದು.

ಹೆಸರು -ಜೇವನದಲ್ಲಿ 2 ಬಾರಿ ಮಾತ್ರ ಬದಲಾವಣೆ ಮಾಡಬಹುದು.

ವಿಳಾಸ – ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದು.

ಮೊಬೈಲ್ ಸಂಖ್ಯೆ -ಇದಕೆ ಯಾವುದೇ ಮಿತಿ ಇಲ್ಲ. ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದು.

ಇದರಿಂದ ನಮಗೆ ಸ್ಪಷ್ಟ ವಾಗುತ್ತದೆ. ಕೆಲವು ವಿಷಯಗಳನ್ನು ಒಮ್ಮೆ ಮಾತ್ರ ಇನ್ನು ಕೆಲವು ವಿವರಗಳನ್ನು ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದು.

update ಮಾಡುವಾಗ ಗಮನಿಸಬೇಕಾದ ಅಂಶಗಳು.

ಕೆಲವರು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಾಗ ಬೇಜವಾಬ್ದಾರಿಯಿಂದ ಮಾಹಿತಿ ನಮೋದು ಮಾಡುತ್ತಾರೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಸಂಭವ ಇರುತ್ತದೆ. ಬ್ಯಾಂಕ್ KYC ಮಾಡುವಾಗ ಸರ್ಕಾರಿ ಯೋಜನೆ ಮಾಡುವಾಗ ನಿಮ್ಮ ಅರ್ಜಿ ತಿರಸ್ಕಾರ ಆಗಬಹುದು.

ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಾಗ ತುಂಬಾ ಎಚ್ಚರಿಕೆಯಿಂದ ನಮೋದು ಮಾಡಬೇಕು. ಸರಿಯಾದ ದಾಖಲೆ ಒದಗಿಸಬೇಕು.

Update ಮಾಡುವುದು ಹೇಗೆ.

ಅಪ್ಡೇಟ್ ಮಾಡುವ ಪ್ರಕ್ರಿಯೆ ಯನ್ನು ಆಧಾರ್ ಪ್ರಾಧಿಕಾರ ತುಂಬಾ ಸರಳ ಮಾಡಿದೆ.ನಿಮ್ಮ ವಿಳಾಸವನ್ನ ಮನೆಯಲ್ಲಿ ನಿಮ್ಮ ಮೊಬೈಲ್ ನಲ್ಲಿ ಅಪ್ಡೇಟ್ ಮಾಡಬಹುದು. ಆದರೆ ಹೆಸರು ಜನ್ಮ ದಿನಾಂಕ, ಮತ್ತು ಲಿಂಗಗಳನ್ನು ಕೇಂದ್ರಕ್ಕೆ ಭೇಟಿ ನೀಡಿ ಅಪ್ಡೇಟ್ ಮಾಡಬೇಕು.

ಯಾವುದೇ ಅಪ್ಡೇಟ್ ಮಾಡುವ ಬದಲು ತುಂಬಾ ಎಚ್ಚರಿಕೆಯಿಂದ ಮಾಹಿತಿ ತುಂಬಬೇಕು.ಎಲ್ಲಾ ಮಾಹಿತಿ ಪರಿಸೀಲನೆ ಮಾಡಬೇಕು.

Leave a Comment