ಪಿ.ಯು.ಸಿ ಪಾಸಾದವರಿಗೆ ಶುಭ ಸುದ್ಡಿ 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಿ.ಯು.ಸಿ ಪಾಸಾದವರಿಗೆ ಶುಭ ಸುದ್ಡಿ 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಕರ್ನಾಟಕ ಸರ್ಕಾರ ಸಿಹಿ ಶುದ್ಗಿ ನೀಡಿದೆ .ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 505 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ .ಕಂದಾಯ ಇಲಾಖೆಯಲ್ಲಿ ವೃತ್ತಿ ಜೀವನ ನಡೆಸಲು ಒಂದು ಉತ್ತಮ ಅವಕಾಶವಾಗಲಿದೆ.ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧೀಕಾರದ ಮೂಲಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗು ಹೈದರಬಾದ್ ಕರ್ನಾಟಕ ಸೇರಿದಂತೆ 572 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ ಮಾಡಿದೆ. ಆಶಕ್ತಿ ಇರುವ ಅಭ್ಯರ್ಥಿಗಳು ಜುಲೈ 31 ಕಿಂತ ಮುಂಚೆ ಸಲ್ಲಿಸಭೇಕು.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಸಂಸ್ಥೆಯ ಹೆಸರುಕರ್ನಾಟಕ ಪರೀಕ್ಷಾ ಪ್ರಾಧೀಕಾರ
ಹುದ್ದೆಯ ಹೆಸರು ಗ್ರಾಮ ಆಡಳಿತ ಅಧಿಕಾರಿ
ಹುದ್ದೆಗಳ ಸಂಖ್ಯೆ 572
ಉದ್ಯೋಗ ಸ್ಥಳ ಕರ್ನಾಟಕ
ವೇತನ40000

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ಶೈಕ್ಷಣಿಕ ಅರ್ಹತೆ ಇರಬೇಕು.ಅರ್ಜಿ ಸಲ್ಲಿಸುವ ಕಡೆಯ ದಿನದಂದು ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು.

  • ಅಭ್ಯರ್ಥಿಯು ಪಿ.ಯು.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  • ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಹೊಂದಿಲ್ಲ.
  • ಅರ್ಜಿ ಸಲ್ಲಿಸುವ ಕೊನೆದಿನಾಂಕ ದಂದು ಅಭ್ಯರ್ಥಿಯು ಅಂಕಪಟ್ಟಿ ಇಟ್ಟು ಕೊಂಡಿರಬೇಕು. ದಾಖಲೆ ಪರಿಸೀಲನೆ ಸಂದರ್ಭದಲ್ಲಿ ಅದನ್ನು ತೋರಿಸಬೇಕು.ಇಲ್ಲ ದಿದ್ದರೆ ಅಭ್ಯರ್ಥಿಯನ್ನ ರದ್ದು ಮಾಡಲಾಗುವುದು.

ವಯೋಮಿತಿ ಸಡಿಲಿಕೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ತುಂಬಿರಬೇಕು. ಸರ್ಕಾರ ಆದೇಶದಂತೆ ಒಂದು ಬಾರಿ ಅನ್ವಯ ವಾಗುವಂತೆ ಎಲ್ಲಾ ವರ್ಗದವರಿಗೆ 05 ವರ್ಷ ಸಡಿಲಿಕೆ ನೀಡಲಾಗಿದೆ.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ -40 ವರ್ಷ
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -43 ವರ್ಷ.
  • Sc/St ಅಭ್ಯರ್ಥಿಗಳಿಗೆ – 45

ಮೀಸಲಾತಿ ಕೋರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅದಕ್ಕೆ ಸಂಬಂಧ ಪಟ್ಟ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು.

ಸ್ಪರ್ಧಾತ್ಮಕ ಪರೀಕ್ಷ ವಿಧಾನ.

ಸ್ಪರ್ಧಾತ್ಮಕ ಪರೀಕ್ಷೆಯು OMR ಮಾದರಿಯ ಪತ್ರಿಕೆ ಹೊಂದಿದೆ.ಒಂದು ಪ್ರಶ್ನೆಗೆ 5 ಆಯ್ಕೆಗಳನ್ನು ನೀಡಲಾಗಿರುತ್ತದೆ.ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುವುದು. ಯಾವುದೇ ಉತ್ತರ ಮಾಡಿದ್ದಲ್ಲಿ 5 ನೇ ಆಯ್ಕೆ ಶೆಡ್ ಮಾಡಬೇಕು, ಇಲ್ಲದಿದ್ದರೆ 0.25 ಅಂಕ ಕಳೆಯಲಾಗುವುದು.

ಕನ್ನಡ ಭಾಷೆ ಪರೀಕ್ಷೆ.

ಹತ್ತನೆ ತರಗತಿಯಲ್ಲಿ ಕನ್ಮಡವನ್ನು ಪ್ರಥಮ ಭಾಷೆಯಾಗಿ ಓದದ ಅಭ್ಯರ್ಥಿಗಳಿಗೆ 150 ಅಂಕಗಳ ಕನ್ಮಡ ಕಡ್ಡಾಯ ಪರೀಕ್ಷೆ ಇರುತ್ತದೆ.ಅರ್ಹತೆ ಪಡೆಯಲು ಕನಿಷ್ಠ 50 ಅಂಕಗಳಿಸುವುದು ಕಡ್ಡಾಯ.

ಪಠ್ಯಕ್ರಮ.

ಈ ಪರೀಕ್ಷೆಯು 2 ಪತ್ರಿಕೆಗಳಿವೆ.

1.ಸಾಮಾನ್ಯ ಜ್ಞಾನ – ಪ್ರಚಲಿತ ಘಟನೆಗಳು , ಭಾರತದ ಸಂವಿದಾನ , ಕರ್ನಾಟಕದ ಇತಿಹಾಸ , ಗ್ರಾಮೀಣ ಅಭಿವ್ಭದ್ದಿ ಮತ್ತು ಪಂಚಾಯತ್ ರಾಜ್. ಕರ್ನಾಟಕದ ಆರ್ಥಿಕತೆ ಸಂಬಂಧ ಪಟ್ಟ ವಿಷಯಗಳು.ಕರ್ನಾಟಕ ಪರಿಸರ ಸಂಬಂಧ ವಿಷಯಗಳು.

2.ಪತ್ರಿಕೆ -2. – ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲಿಷ್ /ಕಂಪ್ಯೂಟರ್ ಜ್ಞಾನ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ 35 ಅಂಕಗಳಿಸಬೇಕು.ಇಲ್ಲದ್ದಿದ್ದರೆ ಅಭ್ಯರ್ಥಿಗಳು ಆಯ್ಕೆ ಆಗುವುದಿಲ್ಲ.

ಅರ್ಜಿ ಶುಲ್ಕ.

ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

  • ಸಾಮಾನ್ಯ ಅರ್ಹತೆ/ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ -750 ರೂಪಾಯಿ.
  • Sc/ St ಅಭ್ಯರ್ಥಿಗಳಿಗೆ – 500.
  • ವಿಶೇಷ ಚೇತನ ಅಭ್ಯರ್ಥಿಗಳಿಗೆ -250 ರೂಪಾಯಿ.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು KEA ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  • ಅಲ್ಲಿ ಇರುವ ಆನ್ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಬೇಕು.
  • ನಿಮ್ಮ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ನಿಮ್ಮ ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಇತರೆ ಪ್ರಮಾಣ ಪತ್ರಗಳನ್ನು ಮುಂಚಿತವಾಗಿ ಇಟ್ಟುಕೊಳ್ಳಬೇಕು.
  • ಅರ್ಜಿ ಸಲ್ಲಿಸಿಕೆ ಪೂರ್ಣಗೊಂಡ ನಂತರ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಪ್ರಮುಖ ದಿನಾಂಕಗಳು.

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – 11/07/2026.
  • ಅರ್ಜಿ ಸಲ್ಲಿಕೆ ಕೊನೆ ದಿನ – 30/07/2026
  • ಶುಲ್ಕ ಪಾವತಿ ಕೊನೆ ದಿನ -30/07/2026
  • ಪರೀಕ್ಷೆ ದಿನಾಂಕ – 04/10/2026

Leave a comment