ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶ ಒದಗಿದೆ.ಪೊಲೀಸ್ ಇಲಾಖೆಯು 2026ನೇ ಸಾಲಿನ ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026 ಆದಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 3395 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡುತ್ತಿದೆ.ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ಬಯಸುವವರಿಗೆ ಒಂದು ಉತ್ತಮ ಅವಕಾಶವಾಗಿದೆ.
ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026.
ನೇಮಕಾತಿ ಸಂಸ್ಥೆ – ಕರ್ನಾಟಕ ಪರೀಕ್ಷೆ ಪ್ರಾಧಿಕಾರ
ಇಲಾಖೆಯ ಹೆಸರು – ಕರ್ನಾಟಕ ರಾಜ್ಯ ಪೊಲೀಸ್
ಒಟ್ಟು ಹುದ್ದೆಗಳು – 3395
ಹುದ್ದೆಯ ಸ್ಥಳ – ಕರ್ನಾಟಕದ್ಯಾಂತ
ವೇತನ – 36000-76000.
ವಯೋಮಿತಿ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿಪಡಿಸಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ದಂದು ಈ ಕೆಳಗಿನ ವಯೋಮಿತಿ ಹೊಂದಿರಬೇಕು.
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ -33 ವರ್ಷ
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ /Sc/St ಅಭ್ಯರ್ಥಿಗಳಿಗೆ -35 ವರ್ಷ
ಕರ್ನಾಟಕ ಅರಣ್ಯ ಪ್ರದೇಶ ಬುಡಕಟ್ಟು ಅಭ್ಯರ್ಥಿ -40 ವರ್ಷ
ಶೈಕ್ಷಣಿಕ ವಿದ್ಯಾರ್ಹತೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಅರ್ಹತೆ ಹೊಂದಿರಬೇಕು.ಕರ್ನಾಟಕ ಪದವಿ ಪೂರ್ವ ಪರೀಕ್ಷೆ ಮಂಡಳಿ ನಡೆಸುವ ಪಿ.ಯು.ಸಿ ಪಾಸ್ ಆಗಿರಬೇಕು.ಅರ್ಜಿ ಸಲ್ಲಿಸುವ ನಿಗದಿಪಡಿಸಿದ ದಿನಾಂಕದಂದು ಫಲಿತಾಂಶ ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಹರಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ PUC ಅಂಕ ಪಟ್ಟಿ ಹೊಂದಿರಬೇಕು.
ಆಯ್ಕೆ ವಿಧಾನ.
ಲಿಖಿತ ಪರೀಕ್ಷೆ ವಿಧಾನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪರೀಕ್ಷೆ offline ಮಾದರಿಯಾಗಿರುತ್ತದೆ.
ಒಟ್ಟು ಪ್ರಶ್ನೆಗಳು -100
ಒಟ್ಟು ಅಂಕಗಳು -100
ಸಮಯ -90 ನಿಮಿಷಗಳು.
ವಿಷಯ – ಸಾಮಾನ್ಯ ಅಧ್ಯಯನ ಭೂಗೋಳ, ಇತಿಹಾಸ, ಪ್ರಚಲಿತ ಘಟಣೆಗಳು.
ಪತ್ರಿಕೆಯು ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುವುದು. ಯಾವುದೇ ಪ್ರಶ್ನೆಗೆ ಉತ್ತರ ಬರಯದೆ ಇದ್ದಲ್ಲಿ 5 ನೇ ವೃತ್ತ ತುಂಬ ಬೇಕು.
ಫಿಸಿಕಲ್ test -ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಕರೆಯಲಾಗುವುದು.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಶುಲ್ಕವನ್ನು ನಿಗದಿ ಮಾಡಿದೆ.
ಸಾಮಾನ್ಯ ಮತ್ತು ಇತರೆ ಪ್ರವರ್ಗ ಅಭ್ಯರ್ಥಿಗಳಿಗೆ -750
ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ -500
ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ.?
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಬೇರೆ ಯಾವುದೇ ಮಾರ್ಗದಲ್ಲಿ ಸಲ್ಲಿಸಲು ಅವಕಾಶ ವಿಲ್ಲಾ. ಅರ್ಜಿ ಸಲ್ಲಿಸುವ ಮುನ್ನ ಎಲ್ಲ ಸೂಚನೆಗಳನ್ನು ಓದಿಕೊಳ್ಳಬೇಕು.
ಅಭ್ಯರ್ಥಿಗಳು ಮೊದಲು Kea ವೆಬ್ಸೈಟ್ ಗೆ ಭೇಟಿ ನೀಡಬೇಕು. ಮಾಹಿತಿಗಳನ್ನು ಎಚ್ಚರಿಕೆಯಿಂದ ತುಂಬಬೇಕು ಯಾವುದೇ ಅಂತ ದಲ್ಲೂ ಬದಲಾವಣೆಗೆ ಅವಕಾಶವಿಲ್ಲ.ಒಂದು ಘಟಕಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಕೆಲವು ದಾಖಲೆಗಳನ್ನು ಇಟ್ಟುಕೊಳ್ಳಬೇಕು.
ಪ್ರವೇಶ ಪತ್ರವನ್ನು ಇಮೇಲ್ ಮತ್ತು ಫೋನ್ ಸಂದೇಶದ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಎಲ್ಲ ಪ್ರಮಾಣ ಪತ್ರಗಳನ್ನು ಇಟ್ಟು ಕೊಳ್ಳಬೇಕು.
ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.
ಪ್ರಮುಖ ದಿನಾಂಕಗಳು.
ಆರಂಭದ ದಿನಾಂಕ – 08-06-2026
ಕೊನೆಯ ದಿನಾಂಕ – 03-07-2026
ಶುಲ್ಕ ಪಾವತಿ ಕೊನೆ ದಿನಾಂಕ – 04-07-2026
ಪರೀಕ್ಷೆ ದಿನಾಂಕ – Agust 02 2026.